ಜಿಲ್ಲಾ ಪಂಚಾಯತ್ ಬಗ್ಗೆ
ಪಂಚಾಯತ್ ರಾಜ್ ಕಾಯಿದೆ, 1993 ರ ಪ್ರಕಾರ ಮೂರು ಹಂತದ ಪಂಚಾಯತಿಗಳನ್ನು ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯತಿಯು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಯಾದಗಿರಿ ಜಿಲ್ಲೆಯು ಮೂರು ತಾಲೂಕಾ ಪಂಚಾಯತಿಗಳನ್ನು ಒಳಗೊಂಡಿದ್ದು, ತಾಲೂಕಾ ಪಂಚಾಯತಿಯ ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುತ್ತಾರೆ. ತಾಲೂಕಾ ಪಂಚಾಯತಿಯು ಕಾರ್ಯನಿರ್ವಾಹಕ ಅಧಿಕಾರಿ (EO) ನೇತೃತ್ವದ ಆಡಳಿತ ರಚನೆ ಹೊಂದಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳು ಇದ್ದು, ಆಯಾ ಹಳ್ಳಿಗಳ ಗುಂಪಿನ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುತ್ತವೆ.
ಜಿಲ್ಲಾ ಪಂಚಾಯತ್ | ಜಿಲ್ಲಾ ಮಟ್ಟದಲ್ಲಿ |
ತಾಲೂಕ ಪಂಚಾಯತ್ | ತಾಲೂಕ ಮಟ್ಟದಲ್ಲಿ |
ಗ್ರಾಮ ಪಂಚಾಯತ್ | ಹಳ್ಳಿಗಳ ಗುಂಪು ಒಂದು ಗ್ರಾಮ ಪಂಚಾಯತಿ |
1999 ರಿಂದ ತಾಲ್ಲೂಕು ಪಂಚಾಯತತಿಯು ತಾಲ್ಲೂಕ ಮಟ್ಟದಲ್ಲಿ ಪಂಚಾಯತ್ ರಾಜ್ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಮಧ್ಯಂತರ ಪಾತ್ರ ವಹಿಸುತ್ತವೆ. ಮತ್ತು ಜಿಲ್ಲಾ ಪಂಚಾಯತ್ ನಿಗದಿ ಪಡಿಸಿದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಾಲ್ಲೂಕು ಪಂಚಾಯತ್ತುಗಳು ಜವಾಬ್ದಾರಿಯಾಗಿತ್ತು. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ತುಗಳು ಗ್ರಾಮಗಳ ಅಭಿವೃದ್ಧಿ ಮತ್ತು ಕೆಲವು ತೆರಿಗೆಗಳ ಸ್ವಾತಂತ್ರ್ಯದ ಜವಾಬ್ದಾರಿಗಳನ್ನು ಹೊಂದಿರುತ್ತದೆ.